kgf-2

ಕೆಜಿಎಫ್- 2 ಟ್ರೈಲರ್ ಹೇಗಿದೆ? ಒಂದನೇ ಅಧ್ಯಾಯದಿಂದ ಹೆಚ್ಚು ಹಣ ಗಳಿಸಬಹುದೇ?

kgf-chapter-2

 ಕೆಜಿಎಫ್ ೨ ಚಿತ್ರದ ಟ್ರೇಲರ್ ನಿಸ್ಸಂಶಯವಾಗಿ ಚೆನ್ನಾಗಿದೆ…

ಕೆಜಿಎಫ್ ಭಾಗ ೧ ರ ಮುಂದುವರಿಕೆಯೇ ಇದಾದುದರಿಂದ, ಅದೇ ಪಾತ್ರಗಳನ್ನು ನಾವು ಮತ್ತೆ ಕಾಣಬಹುದು.

ಗರುಡನನ್ನು ಕೊಂದಾದ ಮೇಲೆ ಏನಾಯಿತು ಎಂದು ಮಾಳವಿಕಾ ಅವರು ಪ್ರಕಾಶ್ ರಾಜ್ ಅವರ ಹತ್ತಿರ ಪ್ರಶ್ನಿಸುವುದರೊಂದಿಗೆ ಈ ಟ್ರೇಲರ್ ಶುರುವಾಗುತ್ತದೆ. ಅನಂತ್ ನಾಗ್ ಅವರ ಅನುಪಸ್ಥಿತಿ ಇದರಲ್ಲಿ ಕಾಣುತ್ತಿದೆ.

ನಂತರ ಪ್ರಧಾನಿ ರಮಿಕಾ ಸೇನ್(ರವೀನಾ ಟಂಡನ್) ಅವರ ಪಾತ್ರ ಇಲ್ಲಿ ಎದ್ದು ಕಾಣುತ್ತದೆ.

ಪ್ರಧಾನಿಯ ಪಾತ್ರ ಈ ಚಿತ್ರದಲ್ಲಿ ಬಹಳ ಮುಖ್ಯವಾಗಿದೆ ಮತ್ತು ಅವರು ಕೆಜಿಎಫ್ ಗಣಿ ಮತ್ತು ಅದರ ಡಾನ್ ಗಳಿಗೆ ಒಂದು ‘ಗತಿ’ ಕಾಣಿಸುವ ಆಕಾಂಕ್ಷೆಯನ್ನು ಹೊಂದಿದ್ದಾರೆ ಎಂದು ತೋರುತ್ತದೆ. ‘ಘುಸ್ ಕೇ ಮಾರೇಂಗೇ(ನುಗ್ಗಿ ಹೊಡೆಯುವೆವು) ‘ ಎನ್ನುವ ಅವರ ಸಂಭಾಷಣೆ ‘ಉರಿ ಸರ್ಜಿಕಲ್ ಸ್ಟ್ರೈಕ್’ ಚಲನಚಿತ್ರದ ನೆನಪು ನೀಡುತ್ತದೆ.

ಸಂಜಯ್ ದತ್ ಅವರು ಅಧೀರ ಎನ್ನುವ ಭೀಕರ ಅವತಾರದ ವಿಲನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ರಾಕಿ ಭಾಯಿ ಅವರ ಪಾತ್ರವು ಟ್ರೇಲರ್ ನಲ್ಲಿ ನಂತರವೇ ಬರುತ್ತದೆ ಮತ್ತು ಯಶ್ ಅವರ ಸ್ವ್ಯಾಗ್ ಆ ಪಾತ್ರದಲ್ಲಿ ಎಂದಿನಂತೆ ಅದ್ಭುತವಾಗಿದೆ. ಕೆಲವು ದೃಶ್ಯಗಳಲ್ಲಿ ಅವರ ಮುಖಭಾವನೆ ಒಂದು ಬೇರೆಯೇ ಮಟ್ಟದಲ್ಲಿತ್ತು ಎಂದು ಅನಿಸಿತು.

ಎರಡನೇ ಭಾಗದಲ್ಲಿ ಬಿಲ್ಡಪ್ ಗಳು ಕಡಿಮೆ, ಕಥೆ ಜಾಸ್ತಿ ಇದೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೂ ಅತಿ ನಿರೀಕ್ಷೆಯು ತುಂಬಾ ಸಲ ನಿರಾಸೆ ಮಾಡಬಲ್ಲದು.

ದೊಡ್ಡ ಬಜೆಟ್ ನ ಹಾಲಿವುಡ್ ಚಿತ್ರಕ್ಕೆ ಮತ್ತು ಹೋಲಿಕೆಯಲ್ಲಿ ಕಡಿಮೆ ಬಜೆಟ್ ನ ನಮ್ಮ ಚಿತ್ರಗಳಿಗೆ ವ್ಯತ್ಯಾಸ VFX ನಲ್ಲಿ ಗೊತ್ತಾಗುತ್ತದೆ. VFX ಕೆಲವು ಕಡೆ ಸ್ವಲ್ಪ ಕಾರ್ಟೂನ್ ನಂತೆ ಬಂದಿದೆ, ಆದರೆ ಕೆಜಿಎಫ್ ಒಂದರ ಹೆಚ್ಚು ಭಾಗ ಸೆಟ್ ಗಳೇ ಇರುವುದರಿಂದ, ಭಾಗ ಎರಡರಲ್ಲಿಯೂ ಸಹ ಅದೇ ರೀತಿ ಇದ್ದು, ಚಿತ್ರ ವೀಕ್ಷಣೆಯ ಅನುಭವಕ್ಕೆ ಅದು ತೊಂದರೆ ಕೊಡದು ಎನ್ನುವ ಆಶಾಭಾವನೆ ಇದೆ.

ನನ್ನ ಪ್ರಕಾರ ಕೆಜಿಎಫ್ ೨ ಟ್ರೇಲರ್ ನಿರೀಕ್ಷೆಯನ್ನು ಹುಸಿಮಾಡಿಲ್ಲ ಮತ್ತು ಸೀಟ್ ತುದಿಗೆ ಕೂರಿಸುವ ಸಾಮರ್ಥ್ಯ ಇರಬಹುದಾದ ಒಂದು ಆಕ್ಷನ್ ಡ್ರಾಮಾ ಚಲನಚಿತ್ರವನ್ನು ಪ್ರೇಕ್ಷಕರು ಏಪ್ರಿಲ್ ೧೪ ರಂದು ನಿರೀಕ್ಷಿಸುತ್ತಿದ್ದಾರೆ. ಕೆಜಿಎಫ್ ಭಾಗ ಒಂದರ ಗಳಿಕೆಯನ್ನು ಮೀರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

How is the KGF-2 trailer? Can you make more money from Chapter One?

The KGF ೨ movie trailer is obviously good…

Since the KGF part is a continuation, we can find the same characters again.

The trailer begins with Malavika questioning Prakash Raj about what happened after he killed Garuda. Anant Nag’s absence is seen in this.

Then there is the role of Prime Minister Ramika Sen (Raveena Tandon).

 

The role of the Prime Minister is very important in this film and it seems that he has an aspiration to have a ‘tempo’ to the KGF mine and its dons. His dialogue, ‘Ghus Kay Marenge’, is reminiscent of the movie ‘Uri Surgical Strike’.

Sanjay Dutt plays the villain of the horror avatar Adhira.

Rocky Bhai’s character comes later in the trailer and Yash’s swag is as awesome as usual. In some scenes, I felt that his facial expression was on a different level.

In the second part, the buildups are minimal, and the story seems to be a little more formal. Yet too much expectation can be let down.

 

VFX distinguishes between a big budget Hollywood film and a comparatively low budget one for our films. The VFX is somewhat cartoonish in some ways, but since there are more than one set of KGFs, the same is true in Part Two, which is not expected to bother the film viewing experience.

 

According to me, the KGF trailer has not been anticipated and audiences are expecting an action drama film to be able to seal the seat. All the features that exceed the earnings of KGF Part One are visible.

Leave a reply

This site is protected by reCAPTCHA and the Google Privacy Policy and Terms of Service apply.